Notice Board

Results of end semester Examination May 2016 announced on this Blog

Friday, October 8, 2010

ರಂಗ ಪ್ರಯೋಗಶಾಲೆಯ ನಾಟಕ

ಕೊಂದವರಾರು.
ನಾಟಕ
ರಚನೆ : ಪ್ರಸನ್ನ / ನಿರ್ದೇಶನ : ಶಶಿಧರ್ ಭಾರಿಘಾಟ್

2010-11 ನೇ ಸಾಲಿನ ರಾಜ್ಯಮಟ್ಟದ ಅಂತರಕಾಲೇಜು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಪಾರಿತೋಷಕ ಕನ್ನಡ ನಾಟಕ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ನಾಟಕವನ್ನು ದಿನಾಂಕ 08 ಅಕ್ಟೋಬರ್  2010 ರಂದು ರವೀಂದ್ರಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10.30ಕ್ಕೆ ಪ್ರದರ್ಶಿಸಲಾಯಿತು.
ಪ್ರಸನ್ನ ಅವರು ಬರೆದ ’ಕೊಂದವರಾರು’ ನಾಟವನ್ನು ಶಶಿಧರ್ ಭಾರಿಘಾಟ್ ನಿರ್ದೇಶಿಸಿದ್ದರು. ಗಜಾನನ ಟಿ ನಾಯ್ಕ ಅವರು ಸಂಗೀತ ನಿರ್ದೇಶನ ಮಾಡಿದ್ದರು.
ಮಹಾತ್ಮ ಗಾಂಧೀಜಿ ಅವರ ಹತ್ಯೆಯ ಪ್ರಶ್ನೆಯನ್ನು ಎತ್ತಿಕೊಂಡ ನಾಟಕ ಮೋಹನದಾಸ ಕರಮಚಂದ ಗಾಂಧಿ, ನಾಥೂರಾಮ ಗೋಡ್ಸೆ ಅವರ ನಡುವಿನ ಕಾಲ್ಪನಿಕ ಸಂಘರ್ಷವನ್ನು ಮುಂದಿಡುತ್ತಾ ಲೇಖಕ ಪ್ರಸನ್ನ ಅವರು ಸಮಕಾಲೀನ ಪರಿಸ್ಥಿತಿಯಲ್ಲಿ ಹಿಂಸೆ ಮತ್ತು ಅಹಿಂಸೆಗಳ ಬಗೆಗಿನ ವ್ಯಾಖ್ಯೆಯನ್ನು ಮಾಡುತ್ತಾರೆ. ಬೋಧನಾಪ್ರದವಾದ ನಾಟಕವನ್ನು ನಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತಮವಾಗಿ ಅಭಿನಯಿಸಿದರು. ತುಂಬಿದ ರಂಗ ಮಂದಿರ ಚಪ್ಪಾಳೆಗಳಿಂದ ತುಂಬಿಹೋಗಿತ್ತು.
ನಾಟಕದ ಕೆಲವು ಚಿತ್ರಗಳು, ನಮ್ಮ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ಗೀತಾ ಕ್ಲಿಕ್ಕಿಸಿದ್ದು









3 comments:

  1. Nataka sogasagi moodi bandide, mukya patragalu abhinayadalli proudimeyannu hondiddavu, natakada antya bhagakintalu adi bhagada kalpaneyannu nirdeshakarada prasanna avaru tamma srujanasheelatege hidida kannadi endu nanna anisike, natakavu kelavomme gondalavannu ountu madidaru ottareyagi natakavu amogavagi modibandide, natakadalli halavaru hosabare adaru avaralli nataneya abivyaktateya tudita eddu kanuvantittu.

    ReplyDelete
  2. drama was awesom.........

    all performed well........

    im proud to say that im the one of the person who tak part in this act(drama)

    ReplyDelete
  3. Really good team work with good settings!!!

    ReplyDelete