ಈ ವರ್ಷದ ಗಾಂಧಿ ಜಯಂತಿ ಸಮಾರಂಭವನ್ನು ಸರಿಯಾಗಿ ಬೆಳಿಗ್ಗೆ 9.15ಕ್ಕೆ ಡಾ. ಹೆಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ವಿದ್ಯಾರ್ಥಿಗಳು ’ರಘುಪತಿ ರಾಘವ ರಾಜಾರಾಂ, ವೈಷ್ಣವ ಜನತೋ’ ಮುಂತಾದ ಹಾಡುಗಳನ್ನು ಹಾಡಿ ಪ್ರಾರಂಭಿಸಿದರು. ಎನ್.ಇ.ಎಸ್. ಸಂಸ್ಥೆಯ ಅಧ್ಯಕ್ಷರಾದ ಡಾ.ಎ.ಎಚ್.ರಾಮರಾವ್ ಅವರು ಸ್ವಾಗತ ಭಾಷಣ ಮಾಡುತ್ತಾ, ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಗಾಂಧಿ ಮೌಲ್ಯಗಳನ್ನು ತಿಳಿಸಿದರು. ಡಾ.ಎಚ್.ಎನ್ ಅಂಥವರಿಂದ ನಮ್ಮ ಸಂಸ್ಥೆಗಳು ಇಂದಿಗೂ ಗಾಂಧಿ ಆದರ್ಶ ಮಾರ್ಗವನ್ನು ಅನುಸರಿಸುತ್ತಿದೆ ಎಂದರು. ಇಂದಿನ ಮುಖ್ಯ ಅತಿಥಿಗಳಾದ ಹಾನಗಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಶೇಖರ ನಂಗಲಿ ಅವರು ’ಮಹಾತ್ಮ ಗಾಂಧಿಜಿ ಅವರ ಹಸಿರು ಕಾಳಜಿ’ ಎಂಬ ವಿಷಯವನ್ನು ಕುರಿತು ಮಾತನಾಡಿ, ನಿಸರ್ಗ ಮತ್ತು ಮಾನವನ ಸಂಬಂಧಗಳು, ಮಾನವನ ಆಸೆಬುರುಕತನ ಮುಂತಾದವುಗಳನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿಕೊಟ್ಟರು. ಗಾಂಧಿ ಸ್ಟಡಿ ಸರ್ಕಲ್ ನ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಲೀಲಾವತಿಯವರು ವಂದನಾರ್ಪಣೆ ಮಾಡಿದರು. ನಮ್ಮ ವಿದ್ಯಾರ್ಥಿಗಳಿಗಾಗಿ ನಡೆಸಲಾಗುತ್ತಿರುವ ’ಗಾಂಧಿ ಮತ್ತು ಸಾಮಾಜಿಕ ಅಭಿವೃದ್ಧಿ’ ಎಂಬ Add-on Courseನ ಸಂಚಾಲಕಿ ಡಾ. ಟಿ.ಪದ್ಮ ಕಾರ್ಯಕ್ರಮ ನಡೆಸಿಕೊಟ್ಟರು.
No comments:
Post a Comment