Notice Board

Results of end semester Examination May 2016 announced on this Blog

Sunday, October 23, 2011

ಬೀದಿ ನಾಟಕ ಪ್ರದರ್ಶನ

ರಂಗಶಂಕರದಲ್ಲಿ 
ಅಕ್ಟೋಬರ್ ರಂಗ ಉತ್ಸವದ ಸಂದರ್ಭದಲ್ಲಿ 
ರಂಗಶಂಕರದ ಆಹ್ವಾನದ ಮೇರೆಗೆ 
ಅಕ್ಟೋಬರ್ ೧೫ ಮತ್ತು ೨೩ ರಂದು 
ನಮ್ಮ ಕಾಲೇಜಿನ ರಂಗ ಪ್ರಯೋಗಶಾಲೆ ವಿದ್ಯಾರ್ಥಿಗಳು 
’ಕತ್ತೆ ಪುರಾಣ’
 ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿದರು. 
ಅಷ್ಟೇ ಅಲ್ಲದೆ ಅಕ್ಟೋಬರ್ ೧೦ ರಂದು ಕಾಲೇಜಿನ ಆವರಣದಲ್ಲಿ  
೧೨ ರಂದು ಎನ್.ಆರ್.ಕಾಲೋನಿ ರಾಮಮಂದಿರದ ಹಿಂದೆಯೂ 
ಇದೇ ನಾಟಕವನ್ನು ಪ್ರದರ್ಶಿಸಲಾಯಿತು.
ಅಕ್ಟೋಬರ್ ೨೩ ಭಾನುವಾರದಂದು ರಂಗಶಂಕರದಲ್ಲಿ ಪ್ರದರ್ಶಿತವಾದ ಈ ನಾಟಕದ ಚಿತ್ರಗಳು
















STREET THEATRE AT RANGA SHANKARA

Amateur yet powerful: college students' make political statement

Street plays are perfect vehicles for political protest. Plays by three college groups at the Ranga Shankara Theatre Festival last week won applause, sometimes for clever lines and at other times for their message
By Umesh P N


ನಾಟಕದ ಬಗ್ಗೆ ಈ ಮೇಲಿನ ವಿಮರ್ಶೆಯ ಪೂರ್ಣಪಾಠವನ್ನು ಓದಲು ಈ ಲಿಂಕ್ ಉಪಯೋಗಿಸಿ : http://bangalore.citizenmatters.in/articles/view/3519-ranga-shankara-street-play-by-college-groups


Thursday, October 13, 2011

2011-12ನೇ ಸಾಲಿನ ಸ್ನಾತಕೋತ್ತರ ತರಗತಿಗಳ ಉದ್ಘಾಟನೆ

ದಿನಾಂಕ 12-9-2011 ರಂದು ಬೆಳಿಗ್ಗೆ 11 ಗಂಟೆಗೆ ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಈ ಸಾಲಿನ ಸ್ನಾತಕೋತ್ತರ ತರಗತಿಗಳ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಯಿತು. ಕೆ.ಎಸ್.ಜಿ ಶಂಕರ್ ಅವರು ಮುಖ್ಯ ಅತಿಥಿಗಳಾಗಿದ್ದು , ಡಾ.ಎ.ಎಚ್.ರಾಮರಾವ್ ಅವರು ಅಧ್ಯಕ್ಷತೆ ವಹಿಸಿದ್ದರು, ನಮ್ಮ ಸಂಸ್ಥೆಯ ಕಾರ್ಯದರ್ಶಿ ಪ್ರೊ.ನಾಗರಾಜ ರೆಡ್ಡಿಯವರುಉಪಸ್ಥಿತರಿದ್ದರು, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಲೀಲಾವತಿಯವರು ವಂದನಾರ್ಪಣೆಯನ್ನು ಮಾಡಿದರು.

Wednesday, October 5, 2011

Botanical Tour September 2011


Botanical  Tour  2011  –  A  Report
A Botanical study cum collection tour was organized ,during September 2011,by the  Department of Botany, The National College, Basavanagudi, Bangalore 560 004 under the patronage of the Principal Dr.M.Leelavathi. She envisaged keen interest in the academic proceedings, trekked the forests, and visited every point of botanical interest almost simulating a sincere student of plant biology. Students of the V semester were guided on the tour by Dr.H.Gokul, Professor & Head, Department of Botany and Prof.D.E.Murthy Rao. The itinerary included an invited visit to the Botanical Garden, Calicut University, which includes a repository of more than 150 species of ‘Ornamental Gingers’, the Spice garden, Green House, Ginger Zone, Medicinal Plant House, Ginger House and Spices House. Dr.Sabu, Professor made elaborate arrangements facilitating the visit very academic. Dr.A.K.Pradeep,Professor of Botany in the Department rendered a demonstration –lecture on the Herbaria. Mr.Alfred,JRF-DST, accompanied the National College party all around the 5 acre- wonderfully maintained Botanical Garden, which has the reputation of being the ‘Best Maintained Botanical  Garden ’ in comparison with any University garden in Asia. Students had the opportunity to observe and study rare species such as Zamia, Gnetum and Victoria.       

The visit to the R&D institute of Arya Vaidya Shala -Centre for Medicinal Plants Research  ( CMPR)  at Kotakal was enriched by the explanation of  Dr.Suresh George and Dr.Sadashiva, Senior Scientists of the institute. Dr.A.B.Remashree, Sr.Scientist, Pharmacognosy gave a  PPT about the research activities of the TATA-DST-DBT-ICMR  funded, Dr Swaminathan - Dr.Abdul Kalam patronized research centre. Students & faculty were fortunate to watch the functioning of LC MS Facility (there are only two such facilities in India). Phytochemical analysis of Raw Drugs was demonstrated.





The visit to The Rappinat Herbarium at St.Joseph’s College,Tiruchirapalli was a very productive experience since its Director Fr.John Britto, personally explained about the Herbarium, herbarium techniques and the need to revitalize Plant Taxonomy. The Rappinat Herbarium has the worldwide reputation as an accredited herbarium recognized by Kew, London and the world Botanical Fraternity. The Director was personally impressed by the interest and interaction of the NCB students in plant taxonomy and even expressed his appreciation as
“Wish you were my students”







Enroute on this academic tour other places of visit included the Guruvayur Temple, Synagogue at Cochin, water ways of Alleppuzha, Tiruvanathapuram, Algae on the rocks at Kanyakumari, the Vivekananda Rock Memorial – Thiruvallavar statue, Madurai and Srirangam.
Thus it was a balanced combination of academic-nature exposure-spiritual and camaraderie journey to enrich the final year B.Sc life science students.
A tour report (technical-botanical) - 10 marks and herbarium submission- 10 marks forms a part of the approved syllabus of the autonomous course in B.Sc (CBZ) at NCB for the V semester practical examination.





The Department of Botany, NCB expresses its deep sense of gratitude to the Principal and Management, NES for the support and encouragement in this regard.

Sunday, October 2, 2011

2 ಅಕ್ಟೋಬರ್ 2011 ಗಾಂಧಿ ಜಯಂತಿ ಸಮಾರಂಭ

ಈ ವರ್ಷದ ಗಾಂಧಿ ಜಯಂತಿ ಸಮಾರಂಭವನ್ನು ಸರಿಯಾಗಿ ಬೆಳಿಗ್ಗೆ 9.15ಕ್ಕೆ ಡಾ. ಹೆಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ವಿದ್ಯಾರ್ಥಿಗಳು ’ರಘುಪತಿ ರಾಘವ ರಾಜಾರಾಂ, ವೈಷ್ಣವ ಜನತೋ’ ಮುಂತಾದ ಹಾಡುಗಳನ್ನು ಹಾಡಿ ಪ್ರಾರಂಭಿಸಿದರು. ಎನ್.ಇ.ಎಸ್. ಸಂಸ್ಥೆಯ ಅಧ್ಯಕ್ಷರಾದ ಡಾ.ಎ.ಎಚ್.ರಾಮರಾವ್ ಅವರು ಸ್ವಾಗತ ಭಾಷಣ ಮಾಡುತ್ತಾ, ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಗಾಂಧಿ ಮೌಲ್ಯಗಳನ್ನು ತಿಳಿಸಿದರು. ಡಾ.ಎಚ್.ಎನ್ ಅಂಥವರಿಂದ ನಮ್ಮ ಸಂಸ್ಥೆಗಳು ಇಂದಿಗೂ ಗಾಂಧಿ ಆದರ್ಶ ಮಾರ್ಗವನ್ನು ಅನುಸರಿಸುತ್ತಿದೆ ಎಂದರು. ಇಂದಿನ ಮುಖ್ಯ ಅತಿಥಿಗಳಾದ ಹಾನಗಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಶೇಖರ ನಂಗಲಿ ಅವರು ’ಮಹಾತ್ಮ ಗಾಂಧಿಜಿ ಅವರ ಹಸಿರು ಕಾಳಜಿ’ ಎಂಬ ವಿಷಯವನ್ನು ಕುರಿತು ಮಾತನಾಡಿ, ನಿಸರ್ಗ ಮತ್ತು ಮಾನವನ ಸಂಬಂಧಗಳು, ಮಾನವನ ಆಸೆಬುರುಕತನ ಮುಂತಾದವುಗಳನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿಕೊಟ್ಟರು. ಗಾಂಧಿ ಸ್ಟಡಿ ಸರ್ಕಲ್ ನ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಲೀಲಾವತಿಯವರು ವಂದನಾರ್ಪಣೆ ಮಾಡಿದರು. ನಮ್ಮ ವಿದ್ಯಾರ್ಥಿಗಳಿಗಾಗಿ ನಡೆಸಲಾಗುತ್ತಿರುವ ’ಗಾಂಧಿ ಮತ್ತು ಸಾಮಾಜಿಕ ಅಭಿವೃದ್ಧಿ’ ಎಂಬ  Add-on Courseನ ಸಂಚಾಲಕಿ ಡಾ. ಟಿ.ಪದ್ಮ ಕಾರ್ಯಕ್ರಮ ನಡೆಸಿಕೊಟ್ಟರು.