Notice Board

Results of end semester Examination May 2016 announced on this Blog

Sunday, September 22, 2013

12th State Level Inter Collegiate Kannada Debate Competitions held on 21 September 2013

12th State Level Inter Collegiate Kannada Debate Competitions held on 21 September 2013
Some photos

ವಾಸ್ತು, ಜ್ಯೋತಿಷ್ಯ ಮಾನಸಿಕ ಕ್ಷೋಭೆ:

ದೊಡ್ಡರಂಗೇಗೌಡ

ಬೆಂಗಳೂರು, ಸೆ.21:
ವಾಸ್ತುವಿನಂಥ ಮೌಢ್ಯಕ್ಕೆ ಸಾರ್ವಜನಿಕ ಶಕ್ತಿ ಸೌಧ ವಿಧಾನಸೌಧದ ಗೋಡೆಯನ್ನೇ ಒಡೆಯುತ್ತಿರುವುದು ವಿಪರ್ಯಾಸ. ವಾಸ್ತು, ಜ್ಯೋತಿಷ್ಯವನ್ನು ಹೇಳುವುದು ಹಾಗು ನಂಬುವುದು ಒಂದು ಮಾನಸಿಕ ಕ್ಷೋಭೆಯಾಗಿದೆ- ಎಂದು ಹಿರಿಯ ಸಾಹಿತಿ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ದೊಡ್ಡರಂಗೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಹಾಗೂ ಕರ್ನಾಟಕ ಚರ್ಚಾವೇದಿಕೆ ಇಂದು ಏರ್ಪಡಿಸಿದ್ದ ಕು. ಎಚ್.ಎಂ. ವನಿತಾ ಸ್ಮಾರಕ 12ನೇ ರಾಜ್ಯಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಯೋತಿಷ್ಯ, ವಾಸ್ತು ಇತ್ಯಾದಿಗಳನ್ನು ನಂಬದೆ ನಿಮ್ಮ ಆತ್ಮಶಕ್ತಿ, ಬುದ್ಧಿಶಕ್ತಿ, ದೇಹಶಕ್ತಿಯಲ್ಲಿ ನಂಬಿಕೆ ಇಡಿ, ನಿಮ್ಮ ಜೀವನದ ಶಿಲ್ಪಿಗಳು ನೀವಾಗುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳೂ ಕೂಡ ತಮ್ಮ ಸ್ವತಂತ್ರ ನಿಲುವನ್ನು ವ್ಯಕ್ತಪಡಿಸುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು, ಆ ನಿಲುವು ಜನಪರ, ಅಭಿವೃದ್ಧಿಪರವಾಗಿರಬೇಕು ಎಂದರು.

 ಹಿರಿಯ ವಕೀಲ ಹಾಗೂ ವಕೀಲರ ಪರಿಷತ್ತಿನ ಸದಸ್ಯರಾದ ಮಲ್ಲೇಶಯ್ಯ ಅವರು ತಮ್ಮ ಪ್ರತಿಭಾವಂತ ಪುತ್ರಿಯ ಹೆಸರಿನಲ್ಲಿ 
(ಅಕಾಲಿಕ ಮರಣಕ್ಕೆ ತುತ್ತಾದ) ಚರ್ಚಾಸ್ಪರ್ಧೆ ಏರ್ಪಡಿಸುವ ಮೂಲಕ ಸ್ಪರ್ಧೆಗಳಲ್ಲೆ ತಮ್ಮ ಮಗಳನ್ನು ಕಾಣುತ್ತಿದ್ದಾರೆ, ವಿದ್ಯಾರ್ಥಿ ವೈಚಾರಿಕತೆ ಮೂಡಿಸುವ ಚರ್ಚಾಸ್ಪರ್ಧೆ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ಲೀಲಾವತಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗ್ರಹಿಕೆ ಅತಿ ಮುಖ್ಯ. ಯಾರು ಹೆಚ್ಚು ಹೆಚ್ಚು ವಿಚಾರ ಗ್ರಹಿಸುತ್ತಾರೋ ಅವರು ಗೆಲ್ಲುತ್ತಾರೆ. ಚರ್ಚಾಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಗ್ರಹಿಕೆಯ ಜ್ಞಾನ ಹೆಚ್ಚುಸುತ್ತದೆ ಎಂದರು. ಅವಿಭಕ್ತ ಕುಟುಂಬಗಳಿಂದ ಮಾತ್ರವೇ ಮಾನವೀಯ ಸಂಬಂಧಗಳು ಉಳಿಯಲು ಸಾಧ್ಯ ಎಂಬ ವಿಷಯದ ಮೇಲೆ ಪದವಿ ವಿಭಾಗದಲ್ಲಿ 46 ಕಾಲೇಜುಗಳ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ವಾಸ್ತು ಮತ್ತು ಜ್ಯೋತಿಷ್ಯ ಮನುಷ್ಯನ ನೆಮ್ಮದಿ ಕೆಡಿಸುತ್ತಿವೆ ಎಂಬ ವಿಷಯದ ಮೇಲೆ ಪದವಿ ಪೂರ್ವ ವಿಭಾಗದಲ್ಲಿ 30ಕ್ಕೂ ಹೆಚ್ಚು ಕಾಲೇಜಿನ 60 ಸ್ಪರ್ಧಿಗಳು ಪಾಲ್ಗೊಂಡು ತಮ್ಮ ಚರ್ಚೆಯನ್ನು ಮಂಡಿಸಿ, ವಾಕ್ ಪ್ರತಿಭೆ ಪ್ರದರ್ಶಿಸಿದರು.
ಪದವಿ ವಿಭಾಗದಲ್ಲಿ ರೂರಲ್ ಕಾಲೇಜು ಕನಕಪುರ ಪಾರಿತೋಷಕ ಪಡೆದರೆ, 
ಪದವಿ ಪೂರ್ವ ವಿಭಾಗದ ಪಾರಿತೋಷಕ ಕ್ರೈಸ್ಟ್ ಜೂನಿಯರ್ ಕಾಲೇಜು, ಬೆಂಗಳೂರು ಪಾಲಾಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಕುಲ ಸಚಿವರಾದ ಪ್ರೊ. ಎಚ್.ಕೆ. ಮೌಳೇಶ್, ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊ| ಸಿ. ನಾಗರಾಜ್ ಹಾಗೂ ಪದವಿ ಕಾಲೇಜಿನ ಉಪ ಪ್ರಾಂಶಪಾಲರಾದ ಪ್ರೊ. ಪ್ರಮೋದ್ ಆರ್. ಮುತಾಲಿಕ ಅವರು ಪ್ರಶಸ್ತಿ ಪ್ರದಾನ ಮಾಡಿದರು.   





No comments:

Post a Comment