ರಾಷ್ಟ್ರೀಯ ಸೇವಾ ಯೋಜನೆ
ನ್ಯಾಷನಲ್ ಕಾಲೇಜು ಬಸವನಗುಡಿ
ರಾಷ್ಟ್ರೀಯ ಯುವ ಸಪ್ತಾಹ
ವಿವೇಕಾನಂದ ಜಯಂತಿಯ ಅಂಗವಾಗಿ ನಮ್ಮ ಕಾಲೇಜು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಭಾಗದ ಸಹಯೋಗದಲ್ಲಿ ರಾಷ್ಟ್ರೀಯ ಯುವ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 12 ಜನವರಿ 2011 ರಂದು ಕಾಲೇಜಿನ ಡಾ.ಎಚ್.ಎನ್ ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎನ್.ಬಿ. ಚಂದ್ರಮೋಹನ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವೇಕಾನಂದರ ವೈಚಾರಿಕತೆ ಮತಧರ್ಮವನ್ನು ಮೀರಿನಿಂತ ಅವರ ಮಾನವಧರ್ಮ, ರಾಜಕೀಯ ಶಕ್ತಿಗಳು ಅವರ ನಿಲುವನ್ನು ತಿರುಚಿ ತಮ್ಮ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗೆಯನ್ನು ತಿಳಿಸಿ ಯುವಶಕ್ತಿಗಳಾದ ವಿದ್ಯಾರ್ಥಿ ಸಮುದಾಯ ಅವರ ವೈಚಾರಿಕತೆಯನ್ನು ಮಾದರಿಯನ್ನಾಗಿಸಿಕೊಳ್ಳಬೇಕಾದ ಅಗತ್ಯವನ್ನು ತಿಳಿಸಿದರು.
ಮತ್ತೋರ್ವ ಅತಿಥಿಗಯಾಗಿ ಆಗಮಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿಗಳಾದ ಡಾ.ಪಿ.ಸಿ.ಕೃಷ್ಣಸ್ವಾಮಿಯವರು ವಿವೇಕಾನಂದರ ಶ್ರದ್ಧೆ ರಾಷ್ಟ್ರದ ಏಳಿಗೆಯಲ್ಲಿ ಯುವ ಶಕ್ತಿಯ ಬಳಕೆಯ ಬಗ್ಗೆ ಅವರಿಗಿದ್ದ ನಂಬಿಕೆ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಎಂ.ಲೀಲಾವತಿಯವರು ವಿವೇಕಾನಂದರ ವಿಶ್ವಮಾನವತಾವಾದ, ಸೋದರ ಪ್ರೇಮ, ಇಂದಿನ ವಿದ್ಯಾರ್ಥಿಸಮುದಾಯ ಈ ನಿಲುವುಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವನ್ನು ತಿಳಿಸುತ್ತಾ ಸ್ವಾರ್ಥ ರಹಿತ ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆ ಇಂದಿನ ವಿದ್ಯಾರ್ಥಿಗಳದು ಎಂದು ತಿಳಿಸಿದರು. ವಿವಿಧ ಕಾಲೇಜುಗಳಿಂದ ಸ್ವಯಂ ಸೇವಕರು ಹಾಗು ಅಧ್ಯಾಪಕರು ಭಾಗವಹಿಸಿದ್ದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
No comments:
Post a Comment