Notice Board

Results of end semester Examination May 2016 announced on this Blog

Tuesday, November 2, 2010

2 ನವೆಂಬರ್ 2010

ಡಾ.ಎಚ್.ಎನ್ ನೆನಪಿನ 5 ನೇ ಅಂತರ ಕಾಲೇಜು ನಾಟಕ ಸ್ಪರ್ಧೆ ಮತ್ತು 49 ನೇ ಅಂತರ್ ವರ್ಗೀಯ ನಾಟಕ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ ಕಾರ್ಯಕ್ರಮ ಮಧ್ಯಾಹ್ನ 3.35 ಕ್ಕೆ ಪ್ರಾರಂಭವಾಯಿತು. ಮುಖ್ಯ ಅತಿಥಿಗಳು ಚಿದಂಬರರಾವ್ ಜಂಬೆ. ಅಧ್ಯಕ್ಷತೆ ಎ.ಎಚ್.ರಾಮರಾವ್. ಡಾ.ಎಚ್.ಎನ್.ಸಭಾಂಗಣದಲ್ಲಿ ನಡೆದ ಸಮಾರಂಭ ಭರ್ತಿ ಜನಗಳಿಂದ ತುಂಬಿಹೋಗಿತ್ತು.  ಡಾ.ಎ.ಎಚ್.ರಾಮರಾವ್, ಮುಖ್ಯ ಅತಿಥಿಗಳಿಗೆ ಸ್ವಾಗತ ಕೋರುತ್ತಾ ನಾಟಕ ಸ್ಪರ್ಧೆ ನಡೆಸುವ ಕಷ್ಟ ಕುರಿತು ಹೇಳಿದರು. ಶಾಲಾಕಾಲೇಜುಗಳಲ್ಲಿ ನಾಟಕ ಆಡಿಸುವುದರ ಮಹತ್ವವನ್ನು ಕುರಿತು ಮಾತನಾಡಿದರು. ನಮ್ಮ ಕಾಲೇಜಿನಲ್ಲಿ 1962 ರಿಂದ ನಿರಂತರವಾಗಿ ಅಂತರ್ ವರ್ಗೀಯ ನಾಟಕಸ್ಪರ್ಧೆ ನಡೆಸುತ್ತಾ ಬಂದಿದ್ದೇವೆ. ಇದು ಒಂದು ಸಾಧನೆ ಎಂದರು.
ಮುಖ್ಯ ಅತಿಥಿಗಳಾದ ಚಿದಂಬರರಾವ್ ಜಂಬೆ ಅವರು ಮಾತನಾಡುತ್ತಾ ರಂಗಭೂಮಿಗೆ ಯುವಕರೆಲ್ಲ ಬಂದು ಸೇರುವ ದಾರಿಯೇ ಶಾಲಾಕಾಲೇಜುಗಳಲ್ಲಿನ ರಂಗ ಚಟುವಟಿಕೆಗಳು. ಇವುಗಳು ವ್ಯಕ್ತಿತ್ವ ವಿಕಸನದ ದಾರಿ. ವಿದ್ಯಾರ್ಥಿಗಳಿಗೆ ಧೈರ್ಯ ಮತ್ತು ಸಾಹಸವನ್ನು ತುಂಬಿಕೊಡುವುದು, ಮುನ್ನುಗ್ಗಿ ಕೆಲಸ ಮಾಡುವುದನ್ನು ಕಲಿಸುವುದು, ನಾಯಕತ್ವದ ಟ್ರೈನಿಂಗ್ ಸಿಗುವುದು ಇಲ್ಲಿಯೇ. ಇದು ಒಂದು ಗುಂಪು ಚಟುವಟಿಕೆ. ಗುಂಪಿನಲ್ಲಿ ಕೆಲಸ ಮಾಡಿದವರಿಗೆ ಮಾನಸಿಕ ದೃಢತೆ ಹೆಚ್ಚುವುದು. ಅಹಂಕಾರ ಅಳಿಯುವುದು. ಇದು ಎಲ್ಲ ಕಲೆಗಳನ್ನೂ ಮೇಳೈಸಿದ ಸಮ್ಯಗ್ ದರ್ಶನ. ಇಲ್ಲಿ ಉಳಿದೆಲ್ಲ ಕಲೆಗಳೂ ತಮ್ಮ ಅಹಂಕಾರವನ್ನು ಕಳೆದುಕೊಂಡು ಒಟ್ಟಾಗಿ ಒಂದು ರಸಾನುಭವಕ್ಕೆ ದುಡಿಯುತ್ತದೆ. ಇಂತಹ ಅನುಭವಕ್ಕೆ ನೀವೆಲ್ಲರೂ ನಿಮ್ಮನ್ನು ಕೊಟ್ಟುಕೊಂಡಿದ್ದೀರಿ, ನಿಮಗೆ ಅಭಿನಂದನೆಗಳು. ಎಂದರು. ನಂತರ ಪ್ರಮುಖ ಕವಿಗಳ ನಾಲ್ಕಾರು ಕವನಗಳನ್ನು ವಾಚಿಸಿ ರಂಜಿಸಿದರು.
ಶ್ರೀಮತಿ ಮೀತ ಮಿಶ್ರ ಅವರು ಅಂತರ ಕಾಲೇಜು ನಾಟಕಸ್ಪರ್ಧೆಯ ತೀರ್ಪುಗಾರರಾಗಿ ಮಾತನಾಡಿದರು.
ಶ್ರೀ ರಾಜ್ ಕುಮಾರ್ ಅವರು ಅಂತರ ತರಗತಿ ನಾಟಕಸ್ಪರ್ಧೆಯ ತೀರ್ಪುಗಾರರಾಗಿ ಮಾತನಾಡಿದರು.
ಮೊದಲಿಗೆ ಅಂತರ ಕಾಲೇಜು ನಾಟಕ ಸ್ಪರ್ಧೆಯ ಬಹುಮಾನಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು.
ನಂತರ- ಅಂತರ ತರಗತಿ ನಾಟಕ ಸ್ಪರ್ಧೆಯ ಬಹುಮಾನಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು.
ಡಾ.ಎಂ.ಲೀಲಾವತಿ ಪ್ರಾಂಶುಪಾಲರು, ವಂದನಾರ್ಪಣೆ ಮಾಡಿದರು.

ಡಾ||ಎಂ ಲೀಲಾವತಿ, ಡಾ||ಎ.ಎಚ್.ರಾಮರಾವ್, ಶ್ರೀ ಚಿದಂಬರರಾವ್ ಜಂಬೆ
ಶ್ರೀ ಚಿದಂಬರರಾವ್ ಜಂಬೆ
ಚಿದಂಬರರಾವ್ ಜಂಬೆ ಮಾತನಾಡುತ್ತಿರುವುದು
ಮುಂದಿನ ಸಾಲಿನಲ್ಲಿ ತೀರ್ಪುಗಾರರು
ಅಂತರಕಾಲೇಜು ನಾಟಕ ಸ್ಪರ್ಧೆಯ ತೀರ್ಪುಗಾರರು ಮೀತ ಮಿಶ್ರ
ಅಂತರ್ ರ್ವರ್ಗೀಯ ನಾಟಕ ಸ್ಪರ್ಧೆಯ ತೀರ್ಪುಗಾರರು ರಾಜ್ ಕುಮಾರ್
ಸ್ಪರ್ಧೆಯ 3ನೇ ಬಹುಮಾನ - ಕೆ.ಆರ್.ಪುರಂ. ಸರ್ಕಾರಿ ಪ್ರಥಮದರ್ಜೆ ಕಾಲೇಜು
ಸ್ಪರ್ಧೆಯ 2ನೇ ಬಹುಮಾನ - ಮಹಾರಾಣಿ ಸರ್ಕಾರಿ ಕಾಲೇಜು
ಸ್ಪರ್ಧೆಯ ಮೊದಲನೆಯ ಬಹುಮಾನ ಎಂ.ಇ.ಎಸ್.ಕಾಲೇಜ್
ಅಂತರ್ ವರ್ಗೀಯ ನಾಟಕ ಸ್ಪರ್ಧೆಯ 3ನೇ ಬಹುಮಾನ
ಅಂತರ್ ವರ್ಗೀಯ ನಾಟಕ ಸ್ಪರ್ಧೆಯ 2ನೇ ಬಹುಮಾನ
ಅಂತರ್ ವರ್ಗೀಯ ನಾಟಕ ಸ್ಪರ್ಧೆಯ ಮೊದಲನೇ ಬಹುಮಾನ ಐದನೆಯ ಸೆಮ್ ಬಿಸಿಎ ವಿದ್ಯಾರ್ಥಿನಿಯರು